Kannada xxx Adult Sex Stories ಸುಮಾಳ ಸುಂದರ 1

Discussion in 'Kannada sex stories - ಕನ್ನಡ ಲೈಂಗಿಕ ಕಥೆಗಳು' started by 007, Dec 6, 2016.

  1. 007

    007 Administrator Staff Member

    Joined:
    Aug 28, 2013
    Messages:
    113,476
    Likes Received:
    2,108
    http://raredesi.com Kannada Sex Stories ಅತ್ತೆ ಮಗಳ ಮದುವೆಯ ಓಡಾಟದಲ್ಲಿ ಆದ ಸುಸ್ತು ಸುಮಾಳಿಗೆ ಗೊತ್ತಾದುದು ಬಸ್ ಹತ್ತಿ ಸೀಟಿನಲ್ಲಿ ಕೂತಾಗಲೇ. ಶೀತಲಳ ಮದುವೆಗೆ ಮನೆಯಿಂದ ಎಲ್ಲರೂ ಹೋಗಿದ್ದರೂ ಸುಮ ಮಾತ್ರ ಅಂದೇ ವಾಪಸು ಬರಬೇಕಿತ್ತು. ಬಯೋಟೆಕ್ನಾಲಜಿ ಕೋರ್ಸಿಗೆ ಸೇರಿಯಾಗಿತ್ತು. ಕೋರ್ಸ್ ಶುರುವಾಗಲು ಇನ್ನೂ ಎರಡು ತಿಂಗಳು ಇತ್ತು.

    ತನ್ನ ಜೊತೆಯೇ ಕಾಲೇಜಿಗೆ ಸೇರಿದ್ದ ಗೆಳತಿ ಯಮುನ, ಮದುವೆಯ ನಡುವೆಯೆ ಫೋನ್ ಮಾಡಿದ್ದಳು. ತನ್ನ ಮೊಬೈಲ್ ರಿಂಗಾಗಿದ್ದು ಸುಮ ಗಮನಿಸಿಯೇ ಇರಲಿಲ್ಲ. ಕೊನೆಗೆ ಯಮುನ ತನ್ನ ಇನ್ನೊಬ್ಬ ಫ್ರೆಂಡ್ ಮೂಲಕ ಸುಮಳ ತಂದೆಯ ನಂಬರ್ ಪಡೆದು ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಳು. ಎಲ್ಲರ ಸರ್ಟಿಫಿಕೇಟುಗಳನ್ನೂ ಪರೀಕ್ಷಿಸಿ ಕಾಲೇಜಿನಿಂದ ಫೋನ್ ಮಾಡುತ್ತಿದ್ದರಂತೆ. ಏನಾದರೂ ಸ್ಪಷ್ಠೀಕರಣ ಬೇಕಿದ್ದರೆ ಕಾಲೇಜಿಗೆ ಹೋಗಿ ಕೊಟ್ಟು ಬರಬೇಕಿತ್ತಂತೆ.

    ಕಾಲೇಜಿನ ಕ್ಲರ್ಕ್ ಒಬ್ಬನ ತಪ್ಪಿನಿಂದ ಎಷ್ಟೋ ಜನರ ಮಾರ್ಕ್ಸ್ ಕಾರ್ಡುಗಳನ್ನು ಪಡೆಯದೆ ಸೀಟು ನೀಡಲಾಗಿತ್ತು. ಕೆಲವೊಬ್ಬರಿಂದ ಝೆರಾಕ್ಸ್ ಕಾಪಿ ಕೂಡ ಪಡೆಯದೆ ಎಡವಟ್ಟಾಗಿತ್ತಂತೆ. ಹಾಗಾಗಿ ಎಷ್ಟೋ ವಿದ್ಯಾರ್ಥಿಗಳ ಮನೆಗೆ ಫೋನ್ ಮಾಡಿ ಅವರನ್ನು ಕರೆಸಿಕೊಳ್ಳುತ್ತಿದ್ದರಂತೆ.

    ಮನೆಯಿಂದ ಎಲ್ಲರೂ ಹತ್ತು ದಿನಕ್ಕೆಂದು ಮಂಗಳೂರಿಗೆ ಹೋಗಿಯಾಗಿತ್ತು. ಮದುವೆಯ ದಿನವೇ ಯಾರೂ ಹೊರಡಲು ರೆಡಿ ಇರಲಿಲ್ಲ. ಕಾಲೇಜಿಗೆ ಹೋಗಿ ಎಲ್ಲಾ ಕೆಲಸ ಮುಗಿಸಿಕೊಂಡು, ಸುಬ್ಬು ಮಾಮ ದುಬೈಗೆ ಹೊರಡುವ ಮುನ್ನ ವಾಪಸು ಬರಲು ಎಲ್ಲರೂ ಹೇಳಿದರು. ಕೊನೆಗೆ ತನ್ನದೆ ವಯಸ್ಸಿನ ಯಾಮಿನಿ ಕೂಡ ಬರಲು ಒಪ್ಪದೆ ತಾನೊಬ್ಬಳೆ ಬೆಂಗಳೂರಿಗೆ ಹೊರಡಬೇಕಾಯ್ತು. ಬಸ್ಸಿನಲ್ಲಿ ನಿದ್ದೆ ಮಾಡಲು ಅನುವಾಗಲೆಂದು ತೆಳು ಉಡುಪುಗಳನ್ನೆ ತೊಟ್ಟಿದ್ದಳು. ನೆಲಮಂಗಲ ಹತ್ತಿರ ಹತ್ತಿರ ಬರುತ್ತಿದ್ದಂತೆ ಚಳಿಯಾಗಿ ಸ್ವಲ್ಪ ಸ್ವಲ್ಪವೇ ಎಚ್ಚರಾಗತೊಡಗಿತು.

    ಮಲ್ಲೇಶ್ವರದಲ್ಲೇ ಇಳಿದು ಆಟೋ ಹಿಡಿದು ಮನೆಗೆ ಬಂದಳು. ಗಂಟೆ ಇನ್ನೂ ಆರೂವರೆಯಾಗಿತ್ತು. ಕಾಲೇಜಿಗೆ ಹೋಗಬೇಕಿದ್ದರೆ ಹೇಗಿದ್ದರೂ ಮನೆಗೆ ಫೋನ್ ಮಾಡುತ್ತಿದ್ದರು. ಹಾಗಾಗಿ ಟೆನ್ಷನ್ ಇರಲಿಲ್ಲ. ಹೊರಡುವ ಭರದಲ್ಲಿ ಹಾಲಿನಲ್ಲಿ ರಾಶಿ ಹಾಕಿದ್ದ ಚಪ್ಪಲಿ ಶೂಸುಗಳನ್ನು ತೆಗೆದು ಜೋಡಿಸಿ ಇಟ್ಟಳು. ಮನೆಯಲ್ಲಿ ಮೇಯ್ನ್ ಗೇಟ್ ಹಾಕಿಬಿಟ್ಟರೆ ಅಂತ ಭಯವೇನು ಇರಲಿಲ್ಲ. ಹಾಗೆ ನೋಡಿದರೆ ಸುಮ ಒಬ್ಬಳೆ ಮನೆಯಲ್ಲಿ ಇದ್ದುದ್ದು ಬಹಳ ಅಪರೂಪ.

    ಮಂಗಳೂರಿಗೆ ಹೋದ ಮೇಲೆ ಈಮೇಲ್, ಆರ್ಕುಟ್ ಚೆಕ್ ಮಾಡಲು ಆಗಿಯೇ ಇರಲಿಲ್ಲ. ಒಂದರ್ಧ ಗಂಟೆ ಲಾಗಿನ್ ಆಗಿದ್ದಳು. ಹೊರಡುವ ಮುನ್ನ ಇದ್ದ ಈಮೇಯ್ಲುಗಳು, ಸ್ಕ್ರ್ಯಾಪುಗಳೇ ಇನ್ನೂ ಇದ್ದವು. ಏನು ಮಾಡುವುದೆಂದು ತಿಳಿಯದೇ ಕಿಟಕಿಯ ಪರದೆ ಸರಿಸಿದಳು. ಹಾಲು ಹಾಕುವ, ಪೇಪರ್ ಮಾರುವ ಹುಡುಗರು ಆಗೀಗ ಕಾಣಿಸುತ್ತಿದ್ದರು. ಪಕ್ಕದ ಮನೆಯ ಕಾರ್ತಿಕ್ ಅಂಕಲ್ ಕಾರಿನ ಗಾಜು ಒರೆಸುತ್ತಿದ್ದರು. ಸಾಧಾರಣವಾಗಿ ಅವರನ್ನು ಹಗಲು ಹೊತ್ತು ನೋಡುವುದೇ ಅಪರೂಪ. ಒಳಕ್ಕೆ ಹೋಗಿ ಮಂಚದ ಮೇಲೆ ಹಾಗೆಯೇ ಒರಗಿಕೊಂಡಳು. ಸುಮಾರಾಗಿ ಜೋಂಪು ಹತ್ತಿತು.

    ಮದುವೆಯ ಗಲಾಟೆ, ಬಸ್ಸು ಒಂದು ಕಡೆ ವಾಲಿದಂತೆ, ಫೋಟೋಕ್ಕೆ ನಿಂತವರೆಲ್ಲರೂ ಹಾರನ್ನಿಗೆ ಬೆಚ್ಚಿದಂತೆ, ಬಸ್ಸಿನ ಕಿಟಕಿಯಿಂದ ತಣ್ಣನೆಯ ಗಾಳಿ ಒಳಗೆ ಬಂದು ಚಳಿಯಾದಂತೆ, ಆ ಚಳಿಗೆ ತನ್ನ ಟ್ಯಾಂಕು ಪೂರ್ತಿ ಭರ್ತಿಯಾದಂತೆ, ಇನ್ನು ತಡೆಯಲಾರದಂತೆ, ನಾಚಿಕೆ ಬಿಟ್ಟು ಎದ್ದು ಡ್ರೈವರಿಗೆ ಹೇಳೋಣವೆಂದರೆ ಬಸ್ಸಿಗೆ ಡ್ರೈವರನೆ ಇಲ್ಲದಂತೆ, ಇನ್ನೂ ಏನೇನೋ ಕನಸು ಕಂಡಳು. ನಿಧಾನಕ್ಕೆ ತಾನು ಮನೆಯಲ್ಲಿರುವುದು ಅವಳ ಅರಿವಿಗೆ ಬಂತು. ಸಧ್ಯ ಬಸ್ಸಿನಲ್ಲಿ ಇಲ್ಲವಲ್ಲ ಅನ್ನೋದು ಸಮಾಧಾನದ ವಿಷಯವಾಯಿತು. ಎದ್ದು ಮೈ ಮುರಿದು ಬಾತ್ ರೂಮಿನ ಕಡೆಗೆ ನೆಡೆದಳು. ಅನ್ಯಮನಸ್ಕಳಾಗಿ ಸಲ್ವಾರಿನ ಲಾಡಿಗೆ ಕೈ ಹಾಕಿ ಗಂಟು ಎಳೆದಳು.
     

Share This Page